ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮ ಇಂದು ದಿನಾಂಕ 21-12-24 ರಂದು ಬೆಳಗ್ಗೆ 10:30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ತಾಲೂಕು ನದಾಫ್ ಪಿಂಜಾರ್ ಸಂಘದ ಅಧ್ಯಕ್ಷ ಅಸ್ಕಾನ್ ಸಾಬ್, ತಾಲೂಕ ಉಪಾಧ್ಯಕ್ಷ ಫಕ್ರುಸಾಬ್ ನದಾಫ್ ತಿಳಿಸಿದ್ದಾರೆ.
ಕೊಪ್ಪಳ ಹಾಗೂ ಇತರ ತಾಲೂಕಿನ ಗ್ರಾಮೀಣ ಹಾಗೂ ನಗರದ ಹಿಂದುಳಿದ ಪ್ರದೇಶದ ಬಡ ಜನರ ಆರೋಗ್ಯದ ಹಿತದೃಷ್ಟಿಯಿಂದ ‘ಉಚಿತ ನೇತ್ರ ತಪಾಸಣಾ ಶಿಬಿರ’ ಹಾಗೂ ‘ಉಚಿತ ಕನ್ನಡಕ’ (8 ದಿನಗಳ ನಂತರ ಅರ್ಹ ಕಡು ಬಡವರಿಗೆ ಮಾತ್ರ) ವಿತರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಕೊಪ್ಪಳ ನಗರದ ಸರ್ದಾರಗಲ್ಲಿಯ ಸಾಲಾರಜಂಗ್ ರೋಡಿನಲ್ಲಿರುವ ಶಿಫಾ ಕ್ಲಿನಿಕ್ (ಡಾ|| ಎಸ್ ಕೆ ರಾಜೂರ ಆಸ್ಪತ್ರೆ)
ಅಲ್ಫಾ ಹೆಲ್ತ್ ಎಜುಕೇಷನ್ ಅಂಡ್ ರೂರಲ್ ಡೆವೆಲೆಪ್‌ಮೆಂಟ್ ಫೌಂಡೇಷನ್ ಕೊಪ್ಪಳ ಹಾಗೂ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘ ಕೊಪ್ಪಳ ತಾಲೂಕ (ಗ್ರಾ) ಘಟಕದ ಸಹಯೋಗದಲ್ಲಿ
ಸೂಚನೆ : ನೇತ್ರ ತಪಾಸಣೆಗೆ ಬರುವವರು ತಮ್ಮ ಆಧಾರ ಕಾರ್ಡ 3 ಪ್ರತಿ ಪಾಸ್ ಪೋರ್ಟ್ ಸೈಜ ಫೋಟೊ ತರುವುದು ಕಡ್ಡಾಯವಿದೆ. ಜೊತೆಗೆ ಸರ್ಕಾರದ ನಿಮ್ಮ ಉಚಿತ ಆರೋಗ್ಯ ಸೌಲಭ್ಯಗಳಿಗಾಗಿ 2024-25 ಕ್ಕೆ ನವಿಕರಿಸಿದ ಆರೋಗ್ಯ ರಕ್ಷಣಾ ಕಾರ್ಡ, ಯಶಸ್ವಿನಿ ಕಾರ್ಡ ಮತ್ತು ಆರೋಗ್ಯ ಭಾಗ್ಯ ABY ESI ಕಾರ್ಡಗಳಿದ್ದಲ್ಲಿ ತರಬೇಕು. ಆದಕಾರಣ ಮೇಲೆ ತಿಳಿಸಿರುವ ಸರ್ದಾರ್ ಗಲ್ಲಿಯ ಶಿಫಾ ಕ್ಲಿನಿಕ್ (ಡಾ|| ಎಸ್ ಕೆ ರಾಜೂರ ಆಸ್ಪತ್ರೆ) ಹತ್ತಿರ ಹಾಜರಾಗಿ ನೋಂದಣಿ ಮಾಡಿಸಬೇಕು.
ಸಲ್ಯಾ ಜಾನ್, ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅಲ್ಪಾ ಹೆಲ್ತ್ ಎಜುಕೇಷನ್ ಅಂಡ್ ರೂರಲ್ ಡೆವೆಲೆಪ್‌ಮೆಂಟ್ ಫೌಂಡೇಷನ್ ಹಾಗೂ ಪದಾಧಿಕಾರಿಗಳು ಕರ್ನಾಟಕ ರಾಜ್ಯನದಾಫ್ ಪಿಂಜಾರ ಸಂಘ ಕೊಪ್ಪಳ ತಾಲೂಕ ಘಟಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ
9741581671, 9008677932, 9741852856, 7899336766 ಸಂಪರ್ಕಿಸುವಂತೆ ತಿಳಿಸಿದ್ದಾರೆ.