
ಕೊಪ್ಪಳ ಕಿರುಜಾತ್ರೆ 2025,ಕೊಪ್ಪಳ ಕೋಗಿಲೆ ಸೀಸನ್ -5 ಗ್ರಾಂಡ್ ಫಿನಾಲೆ ಹಾಗೂ ಕೊಪ್ಪಳ ಕಿರು ಜಾತ್ರೆ ಸೀಸನ್ -2 ರ ಮಜಾ ಭಾರತ, ಕನ್ನಡ ಕೋಗಿಲೆ, ಸರಿಗಮಪ ಹಾಗೂ ಇನ್ನೂ ಅನೇಕ ಕಲಾವಿದರಿಂದ ಅದ್ದೂರಿ ಕಾರ್ಯಕ್ರಮ ಇಂದು ಏಪ್ರಿಲ್ 20 ರವಿವಾರ ಸಂಜೆ 6 ಗಂಟೆಗೆ ನಗರದ ತಾಲೂಕು ಕ್ರೀಡಾಂಗಣ ನಡೆಯಲಿದೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅನ್ನಪೂರ್ಣೇಶ್ವರಿ ಗೋಲ್ಡ್ ಮತ್ತು ಮೀನಾಕ್ಷಿ ಸಿಲ್ವರ್ ಮಾಲೀಕರಾದ ಶ್ರೀ ಬಸವರಾಜ್ ಕೊಡೇಕಲ್, ಶ್ರೀ ನಾಗರಾಜ್ ಕೊಡೇಕಲ್ ಮನವಿ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಚಲನಚಿತ್ರ ತಾರೆ ಹರ್ಷಿಕಾ ಪೂಣಚ್ಚ, ಕಾಮಿಡಿ ಕಿಲಾಡಿಗಳು, ಧಾರವಾಹಿಯ ಕಿರುತೆರೆ ನಟರು ಆಗಮಿಸಲಿದ್ದು ಡಿಕೆಡಿ, ನೃತ್ಯ ತಂಡ ಹಾಗೂ ಬಂಜಾರ ನೃತ್ಯ ತಂಡದವರು,ಕೊಪ್ಪಳದಲ್ಲಿ ಪ್ರಪ್ರಥಮ ಬಾರಿಗೆ ಲೈವ್ ಮ್ಯೂಸಿಕ್ ಮಾನಸಾ ಹೊಳ್ಳ ಹಾಗೂ ಮೈಸೂರು ತಂಡದಿಂದ ಅದ್ದೂರಿ ಕಾರ್ಯಕ್ರಮಗಳು, ನೀಡಲಿದ್ದು ಜನತೆ, ಅಭಿಮಾನಿಗಳು ಕಾರ್ಯಕ್ರಮವನ್ನು ವೀಕ್ಷಿಸಿ ಯಶಸ್ವಿಗೊಳಿಸೋಣ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದ್ದಾರೆ.