January 15, 2026
IMG_20251121_145244

ಕೊಪ್ಪಳ : ನಗರದ ಮಿಲೇನಿಯಂ ಪಬ್ಲಿಕ್ ಸ್ಕೂಲ್‌ನ (ಸಿಬಿಎಸ್ಇ)10ನೇ ವರ್ಷದ ಸಂಭ್ರಮ ಹಾಗೂ 25ನೇ ವಿವಾಹ ವಾರ್ಷಿಕೋತ್ಸವ, 25 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಮಹೋತ್ಸವ- ಸಾತ್ವಿಕ ಸೇವಾ ಕಾರ್ಯಕ್ರಮ ದಿನಾಂಕ 23 ನವೆಂಬರ್ 2025 ಭಾನುವಾರ ಬೆಳಿಗ್ಗೆ 11:00 ಗಂಟೆಗೆ ಗದಗ್ ರಸ್ತೆಯ ಮಿಲೇನಿಯಂ ಪಬ್ಲಿಕ್ ಸ್ಕೂಲ್ ಆವರಣ ಕೊಪ್ಪಳದಲ್ಲಿ ಜರುಗುವುದು.

 

ಜೀವನಕ್ಕೆ ಹೊಸ ಆರಂಭ ನೀಡುವ 25 ಕುಟುಂಬಗಳ
ಸಂತೋಷಕ್ಕೆ ಸಾಕ್ಷಿಯಾಗುವುದು,ನಮಗೆ ದೊರೆತ ಅದೃಷ್ಟ,ನಾವು ಪಡೆದ ಮಹಾಪುಣ್ಯ,ನಮ್ಮ ಜೀವನದ ಈ ಅಮೂಲ್ಯ ಕ್ಷಣ ನಿಮ್ಮ ಸಾನ್ನಿಧ್ಯದಿಂದಲೇ ಪೂರ್ಣ ನಿಮ್ಮನ್ನು ಆತ್ಮೀಯವಾಗಿ ಅತಿಥಿಯಾಗಿ ಅಲ್ಲ —ಕುಟುಂಬದ ಸದಸ್ಯರಂತೆ ಆಹ್ವಾನಿಸುತ್ತೇವೆ ಬನ್ನಿ, ನೀವೆಲ್ಲ ಆಶೀರ್ವಾದ ಮಾಡಿ ಹೊಸ ಜೀವನ ಆರಂಭಿಸುವ 25 ಜೋಡಿಗಳ ಕನಸುಗಳಿಗೆ ಬೆಳಕು ಹಾಕಿ ಶ್ರೇಷ್ಠ ಜೀವನಯಾನಕ್ಕೆ ನಿಮ್ಮ ಪ್ರೀತಿ, ಆಶೀರ್ವಾದ ಸದಾ ನಮ್ಮೊಂದಿಗಿರಲಿ ಎಂದು
ಸಂಸ್ಥೆಯ ಗಿರೀಶ ಕಣವಿ ಧರ್ಮಪತ್ನಿ ಗೀತಾ ಕಣವಿ,ಪುತ್ರ ರೇವಂತ್ ಕಣವಿ, ಪುತ್ರಿ ರಂಜಿತಾ ಕಣವಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *